ಮಾರ್ಗರೆಟ್ ಬಿರ್ಗಿಟ್ಟಾ ಲಾರ್ಸನ್, ನೀ ಸ್ಯಾಂಡ್‌ಸ್ಟೆಡ್ (ಜನನ ೧೮ ಜುಲೈ ೧೯೬೪) ಇವರೊಬ್ಬರು ಸ್ವೀಡಿಷ್ ರಾಜಕಾರಣಿ ಮತ್ತು ಸಂಸದರಾಗಿದ್ದರು. ಇವರು ೨೦೧೦ ರಿಂದ ರಿಕ್ಸ್‌ಡಾಗನ್‌ನಲ್ಲಿ ೨೭೧ ಸ್ಥಾನವನ್ನು ಹೊಂದಿದ್ದಾರೆ. ಲಾರ್ಸನ್ ಅವರು ೨೦೦೪ ರಲ್ಲಿ ಸ್ವೀಡನ್ ಪ್ರಜಾಪ್ರಭುತ್ವವಾದಿಗೆ ಸೇರಿದರು. ಇವರು ೨೦೧೦ ಮತ್ತು ೨೦೧೪ ರ ಸಾರ್ವತ್ರಿಕ ಚುನಾವಣೆಗಳಲ್ಲಿ ಈ ಪಕ್ಷಕ್ಕೆ ಸಂಸದರಾಗಿ ಆಯ್ಕೆಯಾದರು. ೩೦ ಸೆಪ್ಟೆಂಬರ್ ೨೦೧೫ ರಂದು, ಲಾರ್ಸನ್ ಅವರು ಪಕ್ಷವನ್ನು ತೊರೆದಿದ್ದಾರೆ ಎಂದು ಘೋಷಿಸಿದರು. ಆದರೆ ಸ್ವತಂತ್ರವಾಗಿ ರಿಕ್ಸ್‌ಡಾಗ್‌ನಲ್ಲಿ ತನ್ನ ಕೆಲಸವನ್ನು ಮುಂದುವರಿಸುವುದಾಗಿ ತಿಳಿಸಿದರು. ಲಾರ್ಸನ್ ಅವರು ೨೦೦೬ ಮತ್ತು ೨೦೧೦ ರ ನಡುವೆ ಗಾವ್ಲೆ ಸಿಟಿ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು. ಇವರ ಮಗಳು ಲೂಯಿಸ್ ಎರಿಕ್ಸನ್ ಅವರು ಸ್ವೀಡನ್ ಪ್ರಜಾಪ್ರಭುತ್ವವಾದಿ ಪಕ್ಷದ ನಾಯಕ ಜಿಮ್ಮಿ ಅಕೆಸನ್ ಅವರ ಸಂಗಾತಿಯಾಗಿದ್ದರು. == ಉಲ್ಲೇಖಗಳು == [[ವರ್ಗ:೧೯೬೪ ಜನನ]] [[ವರ್ಗ:ಜೀವಂತ ವ್ಯಕ್ತಿಗಳು]]